CreamA Cream article
Article

ನಾಡೋಜ ಡಾ.ಮಹೇಶ ಜೋಶಿಯವರ ವಿರುದ್ದದ ದೂರದರ್ಶನಕ್ಕೆ ಸಂಬಂಧಿಸಿದ 12 ವರ್ಷದ ಹಳೆಯ ಸಿವಿಲ್ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ತಡೆಯಾಜ್ಞೆ.

ಕಸಾಪ

ನಾಡೋಜ ಡಾ.ಮಹೇಶ ಜೋಶಿಯವರ ವಿರುದ್ದದ ದೂರದರ್ಶನಕ್ಕೆ ಸಂಬಂಧಿಸಿದ 12 ವರ್ಷದ ಹಳೆಯ ಸಿವಿಲ್ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ತಡೆಯಾಜ್ಞೆ.

1) ನಾಡೋಜ ಡಾ.ಮಹೇಶ ಜೋಶಿಯವರು, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದಾಗಿನ, 12 ವರ್ಷದಷ್ಟು ಹಳೆಯ ಸಿವಿಲ್ ಪ್ರಕರಣವೊಂದರ ಕುರಿತು, ಬೆಂಗಳೂರು ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೊರ್ಟ್ ಓ.ಎಸ್.ಸಂಖ್ಯೆ 6365/2013 ರ ಕುರಿತಾಗಿ ತೀರ್ಪು ನೀಡಿದ್ದು, ಈ ತೀರ್ಪಿನ ವಿರುದ್ಧವಾಗಿ ನಾಡೋಜ ಡಾ.ಮಹೇಶ ಜೋಶಿಯವರು ಸಲ್ಲಿಸಿದ ಮೇಲ್ಮನವಿಯ ಆಧಾರದ ಮೇಲೆ ಮತ್ತು ಅಡ್ವೊಕೇಟ್ ಜನರಲ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಹಿರಿಯ ವಕೀಲರಾದ, ಶ್ರೀ ಉದಯ ಹೊಳ್ಳ ಅವರ ವಾದವನ್ನು ಪರಿಗಣಿಸಿ, ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಈ ಪ್ರಕರಣವು ನಾಡೋಜ ಡಾ.ಮಹೇಶ ಜೋಶಿಯವರ ದೂರದರ್ಶನದ ಆಡಳಿತಾತ್ಮಕ ಸೇವೆಗೆ ಸಂಬಂಧಪಟ್ಟಿದ್ದೇ ಹೊರತು, ಅದಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವ ಸಂಬಂಧವೂ ಇರುವುದಿಲ್ಲ.

2) ನಾಡೋಜ ಡಾ.ಮಹೇಶ ಜೋಶಿಯವರು 1999-2000 ಸುಮಾರಿಗೆ ಬೆಂಗಳೂರು ದೂರದರ್ಶನದ ಕಾರ್ಯಕ್ರಮ ನಿರ್ವಾಹಕರಾಗಿ , ನಂತರ ಕೇಂದ್ರದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದಾಗ ಭ್ರಷ್ಟಾಚಾರ, ಅಶಿಸ್ತು ಮತ್ತು ಮೈಗಳ್ಳತನ ತಾಂಡವವಾಡುತ್ತಿತ್ತು . ಜೊತೆಗೆ ಗುಂಪುಗಾರಿಕೆ, ಜಾತೀಯತೆ, ಸ್ವಜನಪಕ್ಷಪಾತ, ಪರಸ್ಪರ ವೈಮನಸ್ಯ, ಕೆಲಸದ ಕುರಿತ ನಿರ್ಲಕ್ಷ , ಎಲ್ಲೆಡೆಯೂ ಎದ್ದು ಕಾಣುತ್ತಿತ್ತು,.

ಸದಾ "ಕಟ್ಟುನಿಟ್ಟಿನ ಶಿಸ್ತಿಗೆ" ಹೆಸರಾದ ಹಾಗೂ "ಆಡಳಿತದಲ್ಲಿ ಪರಿಣಾಮಕಾರಿ ಅಧಿಕಾರಿ"ಯಾದ, ನಾಡೋಜ ಡಾ.ಮಹೇಶ ಜೋಶಿಯವರು, ಅತ್ಯಂತ ಕಠಿಣ ಕ್ರಮಗಳಿಂದ ಸಿಬ್ಬಂದಿಗಳಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿಯನ್ನು ರೂಢಿಸಲು ಪ್ರಯತ್ನಿಸಿದರು.

ಇದರಿಂದ ಅತೃಪ್ತರಾದವರು, ಅದರಲ್ಲಿಯೂ ಪ್ರಮುಖವಾಗಿ, ಈ ಪ್ರಕರಣವನ್ನು ದಾಖಲಿಸಿರುವ ಎನ್.ಕೆ.ಮೋಹನ್ ರಾಂ ಅವರ ನೇತೃತ್ವದಲ್ಲಿ "ಪಿತೂರಿ" ಮಾಡಲು ಆರಂಭಿಸಿದರು.

3) ಇವರಲ್ಲಿ 27 ಜನ ಸೇರಿ Programme Staff Association of Aksashavani and Doordarshan(PSA) ‘ಆಕಾಶವಾಣಿ ಮತ್ತು ದೂರದರ್ಶನ ಪ್ರೋಗ್ರಾಂ ಸ್ಟ್ಯಾಫ್ ಅಸೋಸಿಯೇಷನ್’ (ಪಿ.ಎಸ್.ಎ) ಎಂಬ ಲೆಟರ್ ಹೆಡ್ ರೂಪಿಸಿ, ನಾಡೋಜ ಡಾ.ಮಹೇಶ ಜೋಶಿಯವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ನಾಡೋಜ ಡಾ.ಮಹೇಶ ಜೋಶಿಯವರು, ಬೆಂಗಳೂರಿನ ಸಿ.ಎಂ.ಎಂ ನ್ಯಾಯಾಲಯದಲ್ಲಿ "ಕ್ರಿಮಿನಲ್ ದಾವೆ" ಹೂಡಿ , ಅದು CC 185/2000 ಸಂಖ್ಯೆಯಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ, ನವದೆಹಲಿಯ ಪಿ.ಎಸ್.ಎ ಯ ರಾಷ್ಟ್ರೀಯ ಅಧ್ಯಕ್ಷರಾದ, ಸುರೇಶ ಚಂದ್ರ ನಾಯಕ್ ಎಂಬುವವರು ನ್ಯಾಯಾಲದ ಮುಂದೆ ಹಾಜರಾಗಿ, ‘ಆಕಾಶವಾಣಿ ಮತ್ತು ದೂರದರ್ಶನ ಪ್ರೋಗ್ರಾಂ ಸ್ಟ್ಯಾಫ್ ಅಸೋಸಿಯೇಷನ್’ (ಪಿ.ಎಸ್.ಎ) ಎಂಬ ಹೆಸರಿನ ಲೆಟರ್ ಹೆಡ್ ಕೃತಕವಾಗಿ ಕಂಪ್ಯೂಟರ್ ಮೂಲಕ ಸೃಷ್ಟಿ ಮಾಡಿದ್ದಾಗಿದ್ದು , ಇದಕ್ಕೆ ಮಾನ್ಯತೆ ಇರುವುದಿಲ್ಲ. ಅಲ್ಲಿ ನಮೂದಿತರಾಗಿರುವ 27 ಬೆಂಗಳೂರು ದೂರದರ್ಶನದ ಸಿಬ್ಬಂದಿಗಳು, ಪಿ.ಎಸ್. ಎ. ಸಂಘದ ಸದಸ್ಯರಾಗಿರುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುತ್ತಾರೆ.

4) ಸುಳ್ಳು ಮತ್ತು ವಂಚನೆಯ ಉದ್ದೇಶದಿಂದ ಸೃಷ್ಟಿಯಾದ ಲೆಟರ್ ಹೆಡ್, ಜೋಶಿಯವರಿಗೆ ವಂಚನೆ ಮಾಡುವ ಹಾಗೂ ದೂರದರ್ಶನದಲ್ಲಿ ಆಶಿಸ್ತು ಸೃಷ್ಟಿ ಮಾಡುವ ಉದ್ದೇಶದಿಂದಲೇ ರೂಪಿತವಾಗಿದ್ದು ಎನ್ನುವ ಹಿನ್ನೆಲೆಯಲ್ಲಿ ,. ನಾಡೋಜ ಡಾ.ಮಹೇಶ ಜೋಶಿಯವರು ದೂರದರ್ಶನದ ನಿರ್ದೇಶಕರಾಗಿ, "ಆಡಳಿತಾತ್ಮಕ ಕರ್ತವ್ಯದ" ಭಾಗವಾಗಿ , ಬೆಂಗಳೂರಿನ ಜೆ.ಸಿ.ನಗರದ ಪೋಲೀಸ್ ಸ್ಟೇಷನ್ ಗೆ ದೂರನ್ನು ನೀಡಿದಾಗ , ಪೋಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು (ಚಾರ್ಜ್ ಶೀಟ್) ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದರು.

ದೋಷಾರೋಪಣಾ ಪಟ್ಟಿಯ ವಿರುದ್ಧ , ಮೋಹನರಾಮ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದಾಗ, ಅದನ್ನು ಮಾನ್ಯ ಉಚ್ಛ ನ್ಯಾಯಾಲಯ ರದ್ದು ಮಾಡಿರುತ್ತದೆ.

ಎನ್.ಕೆ.ಮೋಹನ ರಾಂ ಅವರಿಗೆ ಪದೋನ್ನತಿ, ಇನ್ನಿತರ ಸೌಲಭ್ಯಗಳು ಮತ್ತು ದೊರಕಬೇಕಾಗಿದ್ದ ನಿವೃತ್ತಿಯ ನಂತರದ ಪಿಂಚಣಿಯಾಗಲಿ ದೊರೆಯಲು ತಡವಾಗಲು, ಮಹೇಶ್ ಜೋಶಿ ಅವರು ಪೊಲೀಸ್ ಸ್ಟೇಷನ್ನಲ್ಲಿ ದಾಖಲಿಸಿದ ಕೇಸೇ ಕಾರಣವೆಂದು ಉಲ್ಲೇಖಿಸಿ, ಪ್ರಸ್ತುತ ಓ.ಎಸ್.6365/2013ರಂತೆ (ರೂ 1,20,000 ) ನಷ್ಟ ಪರಿಹಾರ ಕೋರಿ ಮೊಕದ್ದಮೆಯನ್ನು ಮೋಹನರಾಮ್ ದಾಖಲಿಸಿದ್ದಾರೆ.

5) ಈ ಹಿಂದೆ ಇದೇ ರೀತಿಯಲ್ಲಿ, ಬೆಂಗಳೂರಿನ 56ನೆಯ ಸಿಟಿ ಸಿವಿಲ್ ನ್ಯಾಯಾಲಯದ ಮುಂದೆ, ಇದೆ ಅರ್ಜಿದಾರರಾದ ಮೋಹನ ರಾಂ ಅವರು, OS 4515/2011 ರ ಅನ್ವಯ, ಸಿವಿಲ್ ಮೊಕದ್ದಮೆಯನ್ನು ದಾಖಲಿಸಿ, I)ಮಹೇಶ ಜೋಶಿ ನಿರ್ದೇಶಕರು, ದೂರದರ್ಶನ ಬೆಂಗಳೂರು , II)ದೂರದರ್ಶನದ ಡೈರೆಕ್ಟರ್ ಜನರಲ್ ನವದೆಹಲಿ, ಮತ್ತು III) ಜನಪ್ರಿಯ ಜಾನಪದ ಗಾಯಕ ಮತ್ತು ಅಂದಿನ ದೂರದರ್ಶನದ ಕಾರ್ಯಕ್ರಮ ನಿರ್ವಾಹಕ ಬಾನಂದೂರು ಕೆಂಪಯ್ಯನವರ ವಿರುದ್ಧ, ರೂ 1,20,00ದ ನಷ್ಟ ಪರಿಹಾರವನ್ನು ಕೇಳಿದ್ದು , ಅದನ್ನು ಮಾನ್ಯ ನ್ಯಾಯಾಲಯ 27/2/2017ರಂದು "ವಜಾ" ಮಾಡಿತ್ತು. ಈ ಮೊಕದ್ದಮೆ ಬಾನ0ದೂರು ಕೆಂಪಯ್ಯನವರು ಮೋಹನ್ ರಾಮ್ ವಿರುದ್ಧ ದಾಖಲಿಸಿದ 'ಜಾತಿ ನಿಂದನೆ' ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಅದನ್ನು ಉದ್ದೇಶ ಪೂರ್ವಕವಾಗಿ ಮೋಹನರಾಂ ನ್ಯಾಯಾಲಯದ ಗಮನಕ್ಕೆ ತಂದಿರುವುದಿಲ್ಲ.

6) ಮೊಕದ್ದಮೆ ಹೂಡಿರುವ ಎನ್.ಕೆ.ಮೋಹನ್ ರಾಂ ಅವರ ಹೆಸರು, ‘ಸಂಶಯಾಸ್ಪದ ಬದ್ದತೆ’ (Doubtful Integrity) ಹೊಂದಿರುವ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿಕೊಂಡಿದೆ ಎಂದು, ಪ್ರಸಾರ ಭಾರತಿಯ ಜಾಗೃತ ವಿಭಾಗವು (ವಿಜಲೆನ್ಸ್ ಸೆಕ್ಷನ್) ತಿಳಿಸಿ, ಅವರಿಗೆ ಯಾವುದೇ ಗುರುತರ ಹೊಣೆಗಾರಿಕೆಯನ್ನು ನೀಡಬಾರದೆಂದು ದಿನಾಂಕ 04.08.2004ರಂದೇ ಆದೇಶ ನೀಡಿರುತ್ತದೆ. ಈ ಆದೇಶ ಮೋಹನ್ ರಾಮ್ ಅವರ ವ್ಯಕ್ತಿತ್ವದ ಸ್ವರೂಪವನ್ನು ವನ್ನು ತಿಳಿಸುತ್ತದೆ.

7. ಜೊತೆಗೆ, ಓ.ಎಸ್.ಸಂಖ್ಯೆ 2723/2000 ಅನ್ವಯ, ಬೆಂಗಳೂರಿನ 8ನೆಯ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು, ಮಹೇಶ್ ಜೋಶಿಯವರಿಗೆ ಮಾನ ನಷ್ಟ ಮಾಡಿರುವದಕ್ಕೆ, ಮೋಹನರಾಮ ಅವರು ರೂ 50,000 ಗಳ ಪರಿಹಾರ ನೀಡುವಂತೆ ಕೂಡ ಆದೇಶ ನೀಡಿರುತ್ತದೆ.

8) ಇದಲ್ಲದೆ ಬೆಂಗಳೂರಿನ 8ನೆಯ ಅಪರ CMM ನ್ಯಾಯಾಲಯವು, ಸಿಸಿ 15219/2011 ರಲ್ಲಿ ,. 10 ನವಂಬರ್ 2023 ರಂದು ತೀರ್ಪು ನೀಡಿ, ಮಹೇಶ ಜೋಶಿಯವರಿಗೆ ಮಾನನಷ್ಟ ಮಾಡಿರುವ ಹಿನ್ನೆಲೆಯಲ್ಲಿ, "ಒಂದು ವರ್ಷ ಸಜೆ ಹಾಗೂ ಹತ್ತು ಸಾವಿರ ರೂ ದಂಡ, ಹಾಗೂ ಒಂದು ವೇಳೆ ದಂಡವನ್ನು ತುಂಬದೆ ಹೋದರೆ, ಮೂರು ತಿಂಗಳ ಹೆಚ್ಚಿನ ಸಜೆಯನ್ನು ಅನುಭವಿಸಬೇಕೆಂದು" ತೀರ್ಪು ನೀಡಿರುತ್ತದೆ.

ಹೀಗೆ ಜೋಶಿಯವರು ಬೆಂಗಳೂರು ದೂರದರ್ಶನದಲ್ಲಿ ನಿರ್ಧಾಕ್ಷಣವಾಗಿ ಕಠಿಣ ಕ್ರಮ ಕೈಗೊಂಡು, ಅನೇಕ ತೊಂದರೆಗಳನ್ನು ಅನುಭವಿಸಿ, ಶಿಸ್ತು ಹಾಗೂ ಕರ್ತವ್ಯ ಪ್ರಜ್ಞೆ ಯನ್ನು ಜಾರಿಗೊಳಿಸಿದ ಪರಿಣಾಮದಿಂದಲೇ ಬೆಂಗಳೂರು ದೂರದರ್ಶನ, "ಮಧುರ ಮಧುರ ವೀ ಮಂಜುಳಗಾನ", ಶಿಶುನಾಳ ಶರೀಫರ "ತತ್ವ ರಸಾನುಭವ", "ಹುತಾತ್ಮರ ಸ್ಮರಣಾ0ಜಲಿ", "ಕ್ರಿಸ್ತ ನಮನ" ಮುಂತಾದ ಹೊಸ ಹೊಸ ಕಾರ್ಯಕ್ರಮಗಳೊಂದಿಗೆ, "ಸಮೀಪ ದರ್ಶನ“ವಾಗಿದ್ದನ್ನು ಮತ್ತು ನಾಡೋಜ ಡಾ ಮಹೇಶ ಜೋಶಿ ಯವರ ಜನಪ್ರಿಯತೆಯನ್ನು ಸಹಿಸದ ಅನೇಕರು, ಅದರಲ್ಲೂ ಮೋಹನ್ ರಾಮ್ ನಂತವರು ಅಸೂಯೆಯಿಂದ , ಇಂತಹ ಕೃತ್ಯ ಮಾಡುತ್ತಿರುವದನ್ನೂ ಸಹ ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ.

9) ಮಾನ್ಯ ನ್ಯಾಯಾಲಯವು ಈ ಎಲ್ಲಾ ಅಂಶಗಳನ್ನು ಪರಿಗಣಿಸದೆ , ಅರ್ಜಿದಾರರು ಪ್ರಾರ್ಥಿಸಿದ 120000 ರೂ ಪರಿಹಾರವನ್ನು ಮತ್ತು ಅರ್ಜಿದಾರರು ಪ್ರಾರ್ಥನೆ ಮಾಡದೆ ಇದ್ದ , ಕ್ಷಮಾಪಣೆ ಕುರಿತ ಆದೇಶವನ್ನು ನೀಡಿ, ದೂರದರ್ಶನದಲ್ಲಿ 24.2.2025 ಅಥವಾ 25.02.2025 ರಂದು ಕ್ಷಮಾಪಣೆ ಪ್ರಸಾರ ಮತ್ತು ಏಳು ದಿನಗಳ ಒಳಗಾಗಿ ಪ್ರಮುಖ ದಿನಪತ್ರಿಕೆಗಳಲ್ಲಿ (ಲೀಡಿಂಗ್ ನ್ಯೂಸ್ ಪೇಪರ್) ಕ್ಷಮಾಪಣೆ ಪ್ರಕಟಣೆಯ ಆದೇಶವನ್ನು ನೀಡಿ ‘ ಆದೇಶ ಪರಿಪಾಲನ ವರದಿ ’(Compliance Report)27.2.2025 ರ ಒಳಗೆ ಸಲ್ಲಿಸುವಂತೆ ತಿಳಿಸಿರುತ್ತದೆ.

ಈ ಆದೇಶವು ತನ್ನ ವ್ಯಾಪ್ತಿಯನ್ನು ಮೀರಿದೆ ಎನ್ನುವಂತಹ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಉದಯ್ ಹೊಳ್ಳ ಅವರು ವಾದವನ್ನು ಮಂಡಿಸಿದರು. ದೂರದರ್ಶನದ ಮೂಲಕ ಕ್ಷಮೆ ಕೇಳಲು ಈ ಪ್ರಕರಣದಲ್ಲಿ,. ದೂರದರ್ಶನವು, "ಪ್ರತಿ ವಾದಿ"ಯಾಗಿರುವುದಿಲ್ಲ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು . ಇದನ್ನು ಪರಿಗಣಿಸಿ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುತ್ತದೆ.

10) ಕೆಲವು ಅತೃಪ್ತ ವ್ಯಕ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ದ ಪೂರ್ವಗ್ರಹ ಪೀಡಿತರಾಗಿ ಇದು "ಕ್ರಿಮಿನಲ್ ಮೊಕದ್ದಮೆ", ಅಧ್ಯಕ್ಷರಿಗೆ ದಂಡ ಮತ್ತು ಶಿಕ್ಷೆಯಾಗಿದೆ ಎನ್ನುವ ಸುಳ್ಳ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸುತ್ತಿದ್ದು , ಮಾನ್ಯ ನ್ಯಾಯಾಲಯವು ಕ್ರಿಮಿನಲ್ ನ್ಯಾಯಾಲಯವಾಗಿರದೆ, "ಸಿವಿಲ್ ನ್ಯಾಯಾಲಯ"ವಾಗಿರುತ್ತದೆ ಹಾಗೂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಾತ್ಮಕವಾಗಿ 90 ದಿನಗಳ ಕಾಲಾವಧಿ ಇರುತ್ತದೆ.

11. ಈ ಮೊಕದ್ದಮೆಯು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಬಂಧವೇ ಇಲ್ಲದಿದ್ದರೂ, ಕೆಲವರು "ಸಂಚು ಮಾಡುತ್ತಾ ", ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ, ನಾಡೋಜ ಡಾ ಮಹೇಶ ಜೋಶಿ ಅವರು ರಾಜೀನಾಮೆ ನೀಡಬೇಕೆಂಬ ಬೇಡಿಕೆ, ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ "ಕನ್ನಡದ ಮತದಾರರಿಗೆ ವಂಚನೆ " ಬಗೆದಂತೆ ಹಾಗೂ "ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಪಮಾನ" ಮಾಡಿದಂತೆ.

12) ಹೀಗೆ ಸುದ್ದಿ ಹಬ್ಬಿಸುವವರ ವಿರುದ್ಧವೂ ಕಾನೂನು ಕ್ರಮ ತೆಗೆದು ಕೊಳ್ಳುವ ಅವಕಾಶವಿದೆ ಹಾಗೂ ಹಿಂಜರಿಯುವುದಿಲ್ಲ.

ದೂರದರ್ಶನಕ್ಕೆ ಸಂಬಂಧಿಸಿದ ,ಈ ತೀರ್ಪಿನ ಬಗ್ಗೆ ಸುದ್ಧಿಯನ್ನು ಉದ್ದೇಶ ಪೂರ್ವಕವಾಗಿ ವೈರಲ್ ಮಾಡಿದಾಗ, ಕರ್ನಾಟಕದ ಎಲ್ಲ ಭಾಗಗಳಿಂದ, ದೆಹಲಿಯಿಂದ ಹಾಗೂ ವಿದೇಶಗಳಿಂದ ಅನೇಕ ದೂರದರ್ಶನದ ಅಭಿಮಾನಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿಮಾನಿಗಳು ಮಾನ್ಯ ಅಧ್ಯಕ್ಷರೊಂದಿಗೆ ತಾವು ಯಾವಾಗಲೂ ನಿಂತುಕೊಳ್ಳುವದಾಗಿ ತಿಳಿಸಿದಕ್ಕೆ, ಅತ್ಯಂತ ಹೆಮ್ಮೆಯಿಂದ ಗೌರವದಿಂದ ಅವರ ನಿಷ್ಠೆಗೆ ಮಾನ್ಯ ಅಧ್ಯಕ್ಷರು, ಯಾವಾಗಲೂ ಚಿರಋಣಿಯಾಗಿರುತ್ತಾರೆ.

ಶಂಕರ್ ಭಟ್ ಕಾನೂನು ಸಲಹೆ ಗಾರರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 9448533046l

Read More